ಪಂದ್ಯ ಚಿತ್ರದ ಹಾಡಿನ ಚಿತ್ರೀಕರಣ
Posted date: 06 Fri, Jul 2012 ? 10:50:54 AM

ದೇವು ನಿರ್ದೇಶನದ ಚಂದ್ರು, ಮಾನಸಿ, ಸ್ಪೂರ್ತಿ ನಟಿಸುತ್ತಿರುವ ಹೊಸ ಚಿತ್ರ ಪಂದ್ಯ ಬಹುತೇಕ ಚಿತ್ರೀಕರಣವನ್ನು ಮುಗಿಸಿ ಮುಕ್ತಾಯ ಹಂತದಲ್ಲಿದೆ. ಕೆ. ಮಂಜುನಾಥ್ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಸಕಲೇಶಪುರ, ಚಿಕ್ಕಮಗಳೂರು, ಗೋವಾ ಸೇರಿದಂತೆ ಕರ್ನಾಟಕದ ರಮ್ಯ ಮನೋಹರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ.
ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ಎಂ.ಎನ್. ಲಕ್ಷ್ಮಿದೇವಿ, ಸಂಕೇತ್ ಕಾಶಿ, ಸಂಗೀತ, ಮುನಿ, ಮಾಲತಿ ಸರದೇಶಪಾಂಡೆ, ಶೈಲಜಾ ಜೋಷಿ, ಸಪ್ನ, ಸುಚಿತ್ರ, ರವಿ ಮಡಿಕೆಹಳ್ಳಿ, ಸುಕುಮಾರ್ ಮುಂತಾದವರ ತಾರಾಗಣ ಹಾಗೂ ಹಂಸಗೋಪಿ ಸಂಗೀತ ನಿರ್ದೇಶನ ನೀಡಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.
ಯಜ್ಞಾ ಶೆಟ್ಟಿ ಪಾಲ್ಗೊಳ್ಳುತ್ತಿರುವ ಕಲರ್‌ಫುಲ್ ಹಾಡಿನ ಚಿತ್ರೀಕರಣ ೦೫.೦೭.೨೦೧೨ರ ಗುರುವಾರದಂದು ಗವೀಪುರಂ ಗುಟ್ಟಹಳ್ಳಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ನಡೆಯಲಿದೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed